





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಉಫೈರ್ ಎಂಬ ಹೆಸರಿನ ಒಂದು ಕತ್ತೆಯ ಮೇಲೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಓ ಮುಆದ್! ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದು ನಿನಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಜನರಿಗೆ ಈ ಸಿಹಿಸುದ್ದಿಯನ್ನು ತಿಳಿಸಲೇ?" ಅವರು ಉತ್ತರಿಸಿದರು: "ಬೇಡ, ಅವರಿಗೆ ಸಿಹಿ ಸುದ್ದಿ ತಿಳಿಸಬೇಡ. ಅವರು ಅದರ ಮೇಲೆ ಅವಲಂಬಿತರಾಗಬಹುದು."
Al-Bukhari and Muslimಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದಾಸರ ಮೇಲಿರುವ ಅಲ್ಲಾಹನ ಹಕ್ಕನ್ನು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕನ್ನು ವಿವರಿಸುತ್ತಿದ್ದಾರೆ. ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬಾರದು. ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದರೆ ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡದ ಏಕದೇವ ವಿಶ್ವಾಸಿಗಳನ್ನು ಅವನು ಶಿಕ್ಷಿಸಬಾರದು. ನಂತರ ಮುಆದ್ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಈ ಅನುಗ್ರಹದ ಬಗ್ಗೆ ಜನರು ಸಂತೋಷಪಡುವುದಕ್ಕಾಗಿ ನಾನು ಈ ಸಿಹಿ ಸುದ್ದಿಯನ್ನು ಅವರಿಗೆ ತಿಳಿಸಲೇ?" ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರು ಅದರ ಮೇಲೆ ಅವಲಂಬಿತರಾಗುವರು ಎಂಬ ಭಯದಿಂದ ಅದನ್ನು ತಡೆದರು.
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗ ಮತ್ತು ನರಕವನ್ನು) ಕಡ್ಡಾಯಗೊಳಿಸುವ ಎರಡು ವಿಷಯಗಳು ಯಾವುವು?" ಅವರು ಉತ್ತರಿಸಿದರು: "ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ."
Muslimಒಬ್ಬ ವ್ಯಕ್ತಿ ಪ್ರವಾದಿಯರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ವಿಷಯಗಳ ಬಗ್ಗೆ, ಅಂದರೆ ಸ್ವರ್ಗ ಪ್ರವೇಶವನ್ನು ಕಡ್ಡಾಯಗೊಳಿಸುವ ಮತ್ತು ನರಕ ಪ್ರವೇಶವನ್ನು ಕಡ್ಡಾಯಗೊಳಿಸುವ ಎರಡು ವಿಷಯಗಳ ಬಗ್ಗೆ ಕೇಳುತ್ತಾರೆ: ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸುತ್ತಾರೆ: "ಸ್ವರ್ಗವನ್ನು ಕಡ್ಡಾಯಗೊಳಿಸುವ ವಿಷಯ ಯಾವುದೆಂದರೆ ಒಬ್ಬ ವ್ಯಕ್ತಿ ಅಲ್ಲಾಹನನ್ನು ಮಾತ್ರ ಆರಾಧಿಸುತ್ತಾ ಮತ್ತು ಅವನೊಡನೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದೆ ಮರಣ ಹೊಂದುವುದು. ನರಕವನ್ನು ಕಡ್ಡಾಯಗೊಳಿಸುವ ವಿಷಯ ಯಾವುದೆಂದರೆ, ಅಲ್ಲಾಹನೊಡನೆ ಸಹಭಾಗಿತ್ವ ಮಾಡುತ್ತಾ, ಅವನ ಪ್ರಭುತ್ವದಲ್ಲಿ, ಆರಾಧನೆಯಲ್ಲಿ, ಮತ್ತು ಅವನ ಹೆಸರು ಮತ್ತು ಗುಣಲಕ್ಷಣಗಳಲ್ಲಿ ಅವನಿಗೆ ಸರಿಸಮಾನರನ್ನು ನಿಶ್ಚಯಿಸಿದ ಸ್ಥಿತಿಯಲ್ಲಿ ಮರಣಹೊಂದುವುದು.
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡುವನು. ಪ್ರತಿಯೊಂದು ಸುರುಳಿಯೂ ದೃಷ್ಟಿ ತಲುಪುವಷ್ಟು ದೂರದವರೆಗೆ ಹರಡಿಕೊಂಡಿರುವುದು. ನಂತರ ಅವನು (ಅಲ್ಲಾಹು) ಕೇಳುವನು: "ಇವುಗಳಲ್ಲಿ ಯಾವುದನ್ನಾದರೂ ನೀನು ನಿರಾಕರಿಸುವೆಯಾ? ಕರ್ಮಗಳನ್ನು ದಾಖಲಿಸುವ ನನ್ನ ದೂತರು ನಿನಗೇನಾದರೂ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿನಗೆ ಹೇಳಲು ಏನಾದರೂ ನೆಪವಿದೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಅವನು ಹೇಳುವನು: "ನಿನ್ನ ತಕ್ಕಡಿಯನ್ನು ಇಲ್ಲಿಗೆ ತಾ." ಆ ವ್ಯಕ್ತಿ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಅಲ್ಲಾಹು ಹೇಳುವನು: "(ಹೆದರಬೇಡ), ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ಆ ಸುರಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳು ಹಗುರವಾಗಿ ಚೀಟಿ ಭಾರವಾಗುವುದು. ಅಲ್ಲಾಹನ ಹೆಸರಿಗಿಂತಲೂ ಹೆಚ್ಚು ಭಾರವಾದದ್ದು ಯಾವುದೂ ಇಲ್ಲ."
At-Tirmidhiಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಅಲ್ಲಾಹು ಸೃಷ್ಟಿಗಳೆಲ್ಲರ ನಡುವಿನಿಂದ ಒಬ್ಬ ವ್ಯಕ್ತಿಯನ್ನು ಆರಿಸಿ ಅವನನ್ನು ವಿಚಾರಣೆಗಾಗಿ ಕರೆಯುವನು. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡಲಾಗುವುದು. ಸುರಳಿಗಳು ಎಂದರೆ ಅವನು ಇಹಲೋಕದಲ್ಲಿ ಮಾಡಿದ ದುಷ್ಕೃತ್ಯಗಳನ್ನು ದಾಖಲಿಸಲಾದ ಪುಸ್ತಕಗಳು. ಪ್ರತಿಯೊಂದು ಸುರುಳಿಯು ದೃಷ್ಟಿ ತಲುಪುವಷ್ಟು ಉದ್ದವಾಗಿರುವುದು. ನಂತರ ಸರ್ವಶಕ್ತನಾದ ಅಲ್ಲಾಹು ಆ ವ್ಯಕ್ತಿಯೊಂದಿಗೆ ಕೇಳುವನು: "ಈ ಸುರುಳಿಗಳಲ್ಲಿ ಬರೆದಿರುವ ಏನನ್ನಾದರೂ ನೀನು ನಿರಾಕರಿಸುವೆಯಾ? ಮನುಷ್ಯರ ಕರ್ಮಗಳನ್ನು ದಾಖಲಿಸುವ ನನ್ನ ದೇವದೂತರು ನಿನಗೆ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನೀನು ಇಹಲೋಕದಲ್ಲಿ ಮಾಡಿದ ಈ ದುಷ್ಕರ್ಮಗಳನ್ನು ನೀನು ಮರೆವಿನಿಂದ, ಅಥವಾ ಪ್ರಮಾದದಿಂದ, ಅಥವಾ ಅಜ್ಞಾನದಿಂದ ಮಾಡಿದ್ದೀ ಎಂದು ಸಮರ್ಥಿಸಲು ನಿನ್ನಲ್ಲಿ ಏನಾದರೂ ನೆಪವಿದೆಯೇ?" ಆ ವ್ಯಕ್ತಿ ಹೇಳುವನು: "ಓ ನನ್ನ ಪರಿಪಾಲಕನೇ! ನನ್ನ ಬಳಿ ಯಾವುದೇ ನೆಪಗಳಿಲ್ಲ." ಆಗ ಸರ್ವಶಕ್ತನಾದ ಅಲ್ಲಾಹು ಹೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಸರ್ವಶಕ್ತನಾದ ಅಲ್ಲಾಹು ಆ ವ್ಯಕ್ತಿಯೊಡನೆ ಹೇಳುವನು: “ನಿನ್ನ ತಕ್ಕಡಿಯನ್ನು ತಾ.” ಆಗ ಆ ವ್ಯಕ್ತಿ ಅಚ್ಚರಿಯಿಂದ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಸರ್ವಶಕ್ತನಾದ ಅಲ್ಲಾಹು ಹೇಳುವನು: "ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಆ ಸುರುಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳಿರುವ ತಟ್ಟೆಯು ಹಗುರವಾಗಿ, ಚೀಟಿಯನ್ನು ಇಡಲಾದ ತಟ್ಟೆ ಭಾರವಾಗುವುದು. ಆಗ ಅಲ್ಲಾಹು ಅವನ ಪಾಪಗಳನ್ನು ಕ್ಷಮಿಸುವನು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."
Abu Dawoodಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಸ್ವರ್ಗ ಮತ್ತು ನರಕವನ್ನು ಸೃಷ್ಟಿಸಿದ ನಂತರ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರನ್ನು ಕರೆದು ಹೇಳಿದನು: "ಸ್ವರ್ಗಕ್ಕೆ ಹೋಗಿ ಅದನ್ನು ನೋಡಿ ಬಾ." ಅವರು ಸ್ವರ್ಗಕ್ಕೆ ಹೋಗಿ ಅದನ್ನು ನೋಡಿ ಮರಳಿ ಬಂದರು. ಜಿಬ್ರೀಲ್ ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಆ ಸ್ವರ್ಗದ ಬಗ್ಗೆ ಮತ್ತು ಅಲ್ಲಿರುವ ಸವಲತ್ತುಗಳು, ಗೌರವಗಳು ಮತ್ತು ಒಳಿತುಗಳ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸಲು ಇಷ್ಟಪಡದೇ ಇರಲಾರ ಮತ್ತು ಅದಕ್ಕಾಗಿ ಪರಿಶ್ರಮಿಸದೇ ಇರಲಾರ." ನಂತರ ಅಲ್ಲಾಹು ಸ್ವರ್ಗದ ಸುತ್ತಲೂ, ಅಲ್ಲಾಹನ ಆಜ್ಞೆಗಳನ್ನು ಪಾಲಿಸಬೇಕು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಾಗಬೇಕು ಎಂಬ ಕಷ್ಟಗಳಿಂದ ತುಂಬಿದನು. ಸ್ವರ್ಗವನ್ನು ಪ್ರವೇಶಿಸಲು ಬಯಸುವವನು ಈ ಕಷ್ಟಗಳನ್ನು ದಾಟಿ ಹೋಗಬೇಕು ನಂತರ ಸರ್ವಶಕ್ತನಾದ ಅಲ್ಲಾಹು ಹೇಳಿದನು: "ಓ ಜಿಬ್ರೀಲ್! ನಾನು ಸ್ವರ್ಗದ ಸುತ್ತಲೂ ಕಷ್ಟಗಳನ್ನು ತುಂಬಿದ್ದೇನೆ. ಹೋಗಿ ಅದನ್ನು ನೋಡಿ ಬಾ." ಅವರು ಹೋಗಿ ಅದನ್ನು ನೋಡಿ ಮರಳಿ ಬಂದು ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಅದರ ಮಾರ್ಗದಲ್ಲಿರುವ ಈ ಕಷ್ಟಗಳು ಮತ್ತು ಪರಿಶ್ರಮಗಳಿಂದಾಗಿ ಯಾರಿಗೂ ಅದನ್ನು ಪ್ರವೇಶಿಸಲು ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ." ಹಾಗೆಯೇ, ನರಕವನ್ನು ಸೃಷ್ಟಿಸಿದ ನಂತರ ಅಲ್ಲಾಹು ಹೇಳಿದನು: "ಓ ಜಿಬ್ರೀಲ್! ಹೋಗಿ ಅದನ್ನು ನೋಡಿ ಬಾ." ಅವರು ಹೋಗಿ ಅದನ್ನು ನೋಡಿದರು. ನಂತರ ಹಿಂದಿರುಗಿ ಬಂದು ಜಿಬ್ರೀಲ್ ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಆ ನರಕದರಲ್ಲಿರುವ ಶಿಕ್ಷೆಗಳು, ಕಷ್ಟಗಳು ಮತ್ತು ಹಿಂಸೆಗಳ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸಲು ಅಸಹ್ಯಪಡದೇ ಇರಲಾರ ಮತ್ತು ಅದಕ್ಕೆ ಸಾಗಿಸುವ ಎಲ್ಲ ಮಾರ್ಗಗಳಿಂದ ದೂರವಾಗದೇ ಇರಲಾರ." ನಂತರ ಅಲ್ಲಾಹು ನರಕವನ್ನು ಮತ್ತು ಅದಕ್ಕೆ ಸಾಗುವ ಮಾರ್ಗಗಳನ್ನು ಮೋಹಗಳಿಂದ ಮತ್ತು ವಿಲಾಸಗಳಿಂದ ತುಂಬಿದನು. ನಂತರ ಹೇಳಿದನು: "ಓ ಜಿಬ್ರೀಲ್! ಹೋಗಿ ಅದನ್ನು ನೋಡಿ ಬಾ." ಜಿಬ್ರೀಲ್ ಹೋಗಿ ಅದನ್ನು ನೋಡಿ ಮರಳಿ ಬಂದು ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ನರಕದ ಸುತ್ತಲೂ ಮೋಹಗಳು ಮತ್ತು ವಿಲಾಸಗಳು ತುಂಬಿಕೊಂಡಿರುವುದರಿಂದ ಯಾರಿಗೂ ಅದರಿಂದ ಬಚಾವಾಗಲು ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ." ಅವರು ಹೇಳಿದರು: "ಆಗ ಅವನ ಅರ್ಶ್ ನೀರಿನ ಮೇಲಿತ್ತು."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ, ಸೃಷ್ಟಿಗಳ ಬದುಕು, ಸಾವು, ಆಹಾರ ಮುಂತಾದ ಅವರಿಗೆ ಸಂಬಂಧಿಸಿದ ಎಲ್ಲಾ ವಿಧಿ ನಿರ್ಣಯಗಳನ್ನು ಸವಿಸ್ತಾರವಾಗಿ ಸುರಕ್ಷಿತ ಫಲಕದಲ್ಲಿ ದಾಖಲಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನ ತೀರ್ಮಾನದಂತೆಯೇ ಅವೆಲ್ಲವೂ ಸಂಭವಿಸುತ್ತವೆ. ಆದ್ದರಿಂದ, ಯಾವುದೇ ಒಂದು ವಿಷಯವು ಸಂಭವಿಸುವುದಾದರೂ ಅದು ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದ ಪ್ರಕಾರವೇ ಸಂಭವಿಸುತ್ತದೆ. ಮನುಷ್ಯನಿಗೆ ಏನಾದರೂ ಕೆಡುಕು ಸಂಭವಿಸಿದರೆ, ಅದು ಅವನಿಗೆ ಸಂಭವಿಸದೆ ತಪ್ಪಿ ಹೋಗುವುದಾಗಿರಲಿಲ್ಲ. ಅದೇ ರೀತಿ, ಅವನಿಗೆ ಏನಾದರೂ ಕೆಡುಕು ಸಂಭವಿಸದೆ ತಪ್ಪಿ ಹೋದರೆ, ಅದು ಅವನಿಗೆ ಸಂಭವಿಸುವುದಾಗಿರಲಿಲ್ಲ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”
Al-Bukhari and Muslimಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಅಶ್ಲೀಲ ಕೃತ್ಯಗಳನ್ನು ಮಾಡದೆ—ಅಶ್ಲೀಲ ಕೃತ್ಯಗಳು ಎಂದರೆ ಸಂಭೋಗ ಮತ್ತು ಸಂಭೋಗಕ್ಕೆ ಮುನ್ನುಡಿಯಾಗಿ ಮಾಡುವ ಚುಂಬನ, ಆಲಿಂಗನ, ಸರಸ ಮುಂತಾದ ಕೃತ್ಯಗಳು. ಅಶ್ಲೀಲ ಮಾತುಗಳೂ ಇದರಲ್ಲಿ ಸೇರುತ್ತವೆ—ಮತ್ತು ದುಷ್ಕರ್ಮಗಳನ್ನು ಮಾಡದೆ—ದುಷ್ಕರ್ಮಗಳು ಎಂದರೆ ಪಾಪಗಳು ಮತ್ತು ಕೆಡುಕುಗಳು. ಇಹ್ರಾಮ್ನಲ್ಲಿರುವಾಗ ನಿಷೇಧಿಸಲಾಗಿರುವ ಕಾರ್ಯಗಳನ್ನು ಮಾಡುವುದು ಕೂಡ ಇದರಲ್ಲಿ ಒಳಪಡುತ್ತವೆ—ಹಜ್ಜ್ ನಿರ್ವಹಿಸುವ ವ್ಯಕ್ತಿ ಪಾಪರಹಿತವಾಗಿ ಹುಟ್ಟುವ ಮಗುವಿನಂತೆ ಸಂಪೂರ್ಣ ಪಾಪಮುಕ್ತನಾಗಿ ಹಜ್ಜ್ನಿಂದ ಮರಳುತ್ತಾನೆ.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”
An-Nasaa’iಅರಾಕ್ ಕಡ್ಡಿ ಮುಂತಾದವುಗಳಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಯಿಯು ಹೊಲಸು ಮತ್ತು ದುರ್ನಾತವಿಲ್ಲದೆ ಶುದ್ಧವಾಗಿರುತ್ತದೆ, ಮತ್ತು ಅದರಿಂದ ಅಲ್ಲಾಹು ದಾಸನ ಬಗ್ಗೆ ಸಂಪ್ರೀತನಾಗುತ್ತಾನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಏಕೆಂದರೆ, ಅದು ಅಲ್ಲಾಹನಿಗೆ ವಿಧೇಯತೆ ತೋರುವುದು ಮತ್ತು ಅವನ ಆಜ್ಞಾಪಾಲನೆ ಮಾಡುವುದಾಗಿದೆ. ಮಾತ್ರವಲ್ಲದೆ, ಅದರಿಂದ ಅಲ್ಲಾಹು ಇಷ್ಟಪಡುವ ಸ್ವಚ್ಛತೆಯೂ ಉಂಟಾಗುತ್ತದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು: “ಐದು ವೇಳೆಯ ನಮಾಝ್ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
Muslimಹಗಲು-ರಾತ್ರಿಯಲ್ಲಿ ಕಡ್ಡಾಯವಾಗಿರುವ ಐದು ವೇಳೆಯ ನಮಾಝ್ಗಳು, ಪ್ರತಿ ಶುಕ್ರವಾರ ನಿರ್ವಹಿಸುವ ಜುಮುಅ ನಮಾಝ್, ಪ್ರತಿ ವರ್ಷ ರಮದಾನ್ ತಿಂಗಳಲ್ಲಿ ಆಚರಿಸುವ ಉಪವಾಸಗಳು, ಅವುಗಳ ನಡುವೆ ಸಂಭವಿಸುವ ಕಿರುಪಾಪಗಳಿಗೆ ಪರಿಹಾರವಾಗಿದೆ. ಆದರೆ ಮಹಾಪಾಪಗಳಿಂದ ದೂರವಿರುವವರಿಗೆ ಮಾತ್ರ. ವ್ಯಭಿಚಾರ, ಮದ್ಯಪಾನ ಮುಂತಾದ ಮಹಾಪಾಪಗಳು ಪಶ್ಚಾತ್ತಾಪದಿಂದಲ್ಲದೆ ಪರಿಹಾರವಾಗುವುದಿಲ್ಲ.
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ: ಸಂಬಂಧಿಕರು ಒಳಿತು ಮಾಡಿದರೆ ಮಾತ್ರ ಒಳಿತು ಮಾಡುವವನು, ಪೂರ್ಣ ರೂಪದಲ್ಲಿ ಕುಟುಂಬ ಸಂಬಂಧವನ್ನು ಜೋಡಿಸುವವನಲ್ಲ ಮತ್ತು ಸಂಬಂಧಿಕರಿಗೆ ಒಳಿತು ಮಾಡುವವನಲ್ಲ. ಬದಲಿಗೆ, ನಿಜವಾದ ಮತ್ತು ಪೂರ್ಣ ರೂಪದಲ್ಲಿ ಸಂಬಂಧ ಜೋಡಿಸುವವನು ಯಾರೆಂದರೆ, ಸಂಬಂಧಿಕನು ಸಂಬಂಧ ಕಡಿದರೂ ಅವನೊಂದಿಗೆ ಸಂಬಂಧ ಜೋಡಿಸುವವನು ಮತ್ತು ಸಂಬಂಧಿಕರು ಕೆಟ್ಟದಾಗಿ ವರ್ತಿಸಿದರೂ ಅವರೊಡನೆ ಉತ್ತಮವಾಗಿ ವರ್ತಿಸುವವನಾಗಿದ್ದಾನೆ.