





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಮತರ್ ಬಿನ್ ಉಕಾಮಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ."
At-Tirmidhiಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಒಬ್ಬ ವ್ಯಕ್ತಿ ಇಂತಿಂತಹ ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಮತ್ತು ನಿರ್ಣಯಿಸಿದರೆ ಆತ ಆ ಊರಿನಲ್ಲಿ ಇಲ್ಲದಿದ್ದರೂ, ಆ ಊರಿಗೆ ಹೋಗುವ ಅಗತ್ಯವನ್ನು ಉಂಟು ಮಾಡಿ ಅವನ ಆತ್ಮವನ್ನು ಆ ಊರಿನಲ್ಲಿ ವಶಪಡಿಸುತ್ತಾನೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಚಿಕ್ಕಪ್ಪರಿಗೆ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು." ಅವರು ಹೇಳಿದರು: "ಕುರೈಷರು ನನ್ನನ್ನು ಆಕ್ಷೇಪಿಸುವರು ಮತ್ತು ಅವರು (ಸಾವಿನ) ಭಯದಿಂದ ಹಾಗೆ ಹೇಳಿದರು ಎಂದು ನನ್ನ ಬಗ್ಗೆ ಹೇಳುವರೆಂಬ ಭಯವಿಲ್ಲದಿರುತ್ತಿದ್ದರೆ ನಾನು ನಿನ್ನ ಮಾತನ್ನು ಒಪ್ಪಿ, ನಿನಗೆ ಸಂತೋಷ ಉಂಟಾಗುವಂತೆ ಮಾಡುತ್ತಿದ್ದೆ." ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: "ತಾವು ಪ್ರೀತಿಸುವವರನ್ನು ಸನ್ಮಾರ್ಗಕ್ಕೆ ತರಲು ತಮಗೆ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಬಯಸಿದವರನ್ನು ಸನ್ಮಾರ್ಗಕ್ಕೆ ತರುತ್ತಾನೆ." [ಕಸಸ್: 56].
Muslimಚಿಕ್ಕಪ್ಪ ಸಾವಿನ ಅಂಚಿನಲ್ಲಿದ್ದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಲಾಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ) ಎಂದು ಹೇಳುವಂತೆ ಬೇಡಿಕೊಳ್ಳುತ್ತಾರೆ. ಅವರು ಅದನ್ನು ಹೇಳಿದರೆ, ಅದನ್ನು ಹಿಡಿದು ಪುನರುತ್ಥಾನ ದಿನದಂದು ನಾನು ತಮಗೆ ಶಿಫಾರಸು ಮಾಡುವೆನು ಮತ್ತು ತಾವು ಇಸ್ಲಾಂ ಸ್ವೀಕರಿಸಿದ್ದೀರಿ ಎಂದು ಸಾಕ್ಷಿ ನುಡಿಯುವೆನು ಎಂದು ಅವರು ಹೇಳುತ್ತಾರೆ. ಆದರೆ ಅಬೂತಾಲಿಬ್ ಸಾಕ್ಷಿವಚನಗಳನ್ನು ಉಚ್ಛರಿಸಲು ಅಸಮ್ಮತಿ ಸೂಚಿಸಿದರು. ಏಕೆಂದರೆ, ಅವರಿಗೆ ಕುರೈಷರು ಅವರನ್ನು ಆಕ್ಷೇಪಿಸುತ್ತಾ ಸಾವಿನ ಭಯದಿಂದ ಬಲಹೀನನಾಗಿ ಈತ ಅದನ್ನು ಹೇಳಿದ್ದಾನೆಂದು ಹೇಳುವರು ಎಂಬ ಭಯವಿತ್ತು. ಆದ್ದರಿಂದ ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಆ ಭಯವಿಲ್ಲದಿರುತ್ತಿದ್ದರೆ ನಾನು ಸಾಕ್ಷಿವಚನಗಳನ್ನು ಉಚ್ಛರಿಸಿ ನಿನಗೆ ಸಂತೋಷ ಉಂಟಾಗುವಂತೆ ಮಾಡುತ್ತಿದ್ದೆ ಮತ್ತು ನಿನ್ನ ಆಸೆಯನ್ನು ನೆರವೇರಿಸುತ್ತಿದ್ದೆ." ಆಗ ಸರ್ವಶಕ್ತನಾದ ಅಲ್ಲಾಹು ಈ ಆಯತ್ತನ್ನು ಅವತೀರ್ಣಗೊಳಿಸಿ, ಹೃದಯವನ್ನು ಪರಿವರ್ತಿಸಿ ಇಸ್ಲಾಂ ಸ್ವೀಕರಿಸುವಂತೆ ಮಾರ್ಗದರ್ಶನ ಮಾಡುವ ಶಕ್ತಿ ಪ್ರವಾದಿಯವರಿಗಿಲ್ಲ; ಅದು ಅಲ್ಲಾಹನಿಗೆ ಮಾತ್ರ ಇರುವ ಶಕ್ತಿಯಾಗಿದ್ದು, ಅವನು ಬಯಸಿದವರಿಗೆ ಅವನು ಆ ಮಾರ್ಗದರ್ಶನವನ್ನು ನೀಡುತ್ತಾನೆ; ಪ್ರವಾದಿಯವರಿಗೆ ಇರುವುದು ಕೇವಲ ಪುರಾವೆ, ವಿವರಣೆ ಮತ್ತು ನಿರ್ದೇಶನಗಳ ಮೂಲಕ ಸನ್ಮಾರ್ಗವನ್ನು ತೋರಿಸುವ ಹಾಗೂ ನೇರವಾದ ಮಾರ್ಗಕ್ಕೆ ಆಮಂತ್ರಿಸುವ ಅಧಿಕಾರ ಮಾತ್ರವಾಗಿದೆ ಎಂದು ಹೇಳುತ್ತಾನೆ.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಇಬ್ನ್ ಜುದ್ಆನ್ ಕುಟುಂಬ ಸಂಬಂಧಗಳನ್ನು ಜೋಡಿಸುತ್ತಿದ್ದರು ಮತ್ತು ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಅವರಿಗೆ ಅದು ಉಪಕರಿಸುತ್ತದೆಯೇ?" ಅವರು ಹೇಳಿದರು: “ಇಲ್ಲ, ಅವರಿಗೆ ಅದು ಉಪಕರಿಸುವುದಿಲ್ಲ. ಏಕೆಂದರೆ ಅವರು ಒಂದು ದಿನವೂ, 'ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು' ಎಂದು ಹೇಳಿಲ್ಲ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಬ್ದುಲ್ಲಾ ಬಿನ್ ಜುದ್ಆನ್ ಎಂಬ ವ್ಯಕ್ತಿಯ ಬಗ್ಗೆ ತಿಳಿಸುತ್ತಾರೆ. ಅವರು ಇಸ್ಲಾಂ ಪೂರ್ವ ಕಾಲದಲ್ಲಿ ಕುರೈಷ್ ಮುಖಂಡರಲ್ಲಿ ಒಬ್ಬರಾಗಿದ್ದರು. ಅವರು ಮಾಡುತ್ತಿದ್ದ ಕೆಲವು ಸತ್ಕಾರ್ಯಗಳೇನೆಂದರೆ, ಕುಟುಂಬ ಸಂಬಂಧವನ್ನು ಜೋಡಿಸುವುದು, ಕುಟುಂಬಿಕರಿಗೆ ಸಹಾಯ ಮಾಡುವುದು, ಬಡವರಿಗೆ ಅನ್ನದಾನ ಮಾಡುವುದು ಮತ್ತು ಇಸ್ಲಾಂ ಧರ್ಮವು ಪ್ರೋತ್ಸಾಹಿಸಿದ ಅನೇಕ ಸತ್ಕಾರ್ಯಗಳನ್ನು ಅವರು ಮಾಡುತ್ತಿದ್ದರು. ಆದರೆ ಈ ಸತ್ಕಾರ್ಯಗಳು ಪರಲೋಕದಲ್ಲಿ ಅವರಿಗೆ ಉಪಕರಿಸುವುದಿಲ್ಲವೆಂದು ಪ್ರವಾದಿಯವರು ಹೇಳುತ್ತಾರೆ. ಏಕೆಂದರೆ ಆತ ಸತ್ಯನಿಷೇಧಿಯಾಗಿದ್ದ ಮತ್ತು ಜೀವನದಲ್ಲಿ ಒಮ್ಮೆಯೂ "ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು" ಎಂದು ಹೇಳಿರಲಿಲ್ಲ.
ಹಕೀಮ್ ಬಿನ್ ಹಿಝಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ನಾನು ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನನಗೆ ಏನಾದರೂ ಪ್ರತಿಫಲ ದೊರೆಯುವುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯನಿಷೇಧಿಯಾಗಿದ್ದ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಅವನು ಸತ್ಯನಿಷೇಧಿಯಾಗಿದ್ದಾಗ ಮಾಡಿದ ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳಿಗೆ ಪ್ರತಿಫಲವನ್ನು ಪಡೆಯುತ್ತಾನೆ.
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಪಟ ವಿಶ್ವಾಸಿಯ ಉದಾಹರಣೆಯು ಎರಡು ಕುರಿಮಂದೆಯ ನಡುವೆಯಿರುವ ಒಂದು ಕುರಿಯಂತಿದೆ. ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಈ ಮಂದೆಗೂ ಚಲಿಸುತ್ತದೆ."
Muslimಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪಟ ವಿಶ್ವಾಸಿಯ ಬಗ್ಗೆ ವಿವರಿಸುತ್ತಾರೆ. ಅಂದರೆ, ಅವರ ಉದಾಹರಣೆಯು ಎರಡು ಕುರಿಮಂದೆಗಳಲ್ಲಿ ಯಾವುದನ್ನು ಹಿಂಬಾಲಿಸಬೇಕು ಎಂಬುದನ್ನು ತಿಳಿಯದೆ ಅತಂತ್ರ ಸ್ಥಿತಿಯಲ್ಲಿರುವ ಒಂದು ಕುರಿಯಂತಿದೆ ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಆ ಮಂದೆಗೂ ಹೋಗುತ್ತದೆ. ಅವರು ಸತ್ಯವಿಶ್ವಾಸ ಮತ್ತು ಸತ್ಯನಿಷೇಧದ ನಡುವೆ ಗಲಿಬಿಲಿಯಲ್ಲಿರುತ್ತಾರೆ. ಅವರು ಬಾಹ್ಯವಾಗಿ ಮತ್ತು ಆಂತರಿಕವಾಗಿ ಸತ್ಯವಿಶ್ವಾಸಿಗಳೊಂದಿಗೂ ಇರುವುದಿಲ್ಲ ಮತ್ತು ಸತ್ಯನಿಷೇಧಿಗಳೊಂದಿಗೂ ಇರುವುದಿಲ್ಲ. ಬದಲಿಗೆ ಅವರು ಬಾಹ್ಯವಾಗಿ ಸತ್ಯ ವಿಶ್ವಾಸಿಗಳೊಂದಿಗೆ ಇದ್ದರೂ ಅವರ ಆಂತರ್ಯವು ಸಂಶಯ ಮತ್ತು ಹಿಂಜರಿಕೆಯಲ್ಲಿರುತ್ತದೆ. ಅವರು ಕೆಲವೊಮ್ಮೆ ಅವರೊಡನೆ ಸೇರಿದರೆ, ಕೆಲವೊಮ್ಮೆ ಇವರೊಡನೆ ಸೇರುತ್ತಾರೆ.
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ."
Al-Haakimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಹೊಸ ಬಟ್ಟೆಯನ್ನು ಬಹಳ ಸಮಯದವರೆಗೆ ಬಳಸಿದರೆ ಅದು ಹಳತಾಗುವಂತೆ ಮುಸಲ್ಮಾನನ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ ಮತ್ತು ದುರ್ಬಲವಾಗುತ್ತದೆ. ಆರಾಧನೆಗಳಲ್ಲಿ ನಿಷ್ಠೆ ಇಲ್ಲದಿರುವುದು, ಪಾಪಗಳನ್ನು ಮಾಡುವುದು ಮತ್ತು ಮೋಜು ಮಸ್ತಿಗಳಲ್ಲಿ ಮುಳುಗುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ, ಕಡ್ಡಾಯ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವುದರ ಮತ್ತು ಅಲ್ಲಾಹನ ಸ್ಮರಣೆ ಹಾಗೂ ಅವನಲ್ಲಿ ಕ್ಷಮೆ ಬೇಡುವುದನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ವಿಶ್ವಾಸವನ್ನು ನವೀಕರಿಸಲು ನಾವು ಅಲ್ಲಾಹನೊಂದಿಗೆ ನಿರಂತರ ಬೇಡಿಕೊಳ್ಳಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಿರ್ದೇಶಿಸುತ್ತಾರೆ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ತಾನು ಕಡ್ಡಾಯಗೊಳಿಸಿದ ಕಾರ್ಯಗಳನ್ನು (ದಾಸರು) ನಿರ್ವಹಿಸುವುದನ್ನು ಅಲ್ಲಾಹು ಇಷ್ಟಪಡುವಂತೆಯೇ ತಾನು ರಿಯಾಯಿತಿ ನೀಡಿದ ಕಾರ್ಯಗಳನ್ನು (ದಾಸರು) ಸ್ವೀಕರಿಸುವುದನ್ನು ಅವನು ಇಷ್ಟಪಡುತ್ತಾನೆ."
Ibn Hibbaanಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಧಾರ್ಮಿಕ ವಿಷಯಗಳಲ್ಲಿ ಅಲ್ಲಾಹು ನೀಡಿದ ರಿಯಾಯಿತಿಗಳನ್ನು, ಅಂದರೆ ನಿಯಮಗಳಲ್ಲಿ ಮತ್ತು ಆರಾಧನೆಗಳಲ್ಲಿರುವ ರಿಯಾಯಿತಿಗಳನ್ನು ಮತ್ತು ಪ್ರಯಾಣದ ಸಂದರ್ಭಗಳಲ್ಲಿ ನಮಾಝನ್ನು ಕುಗ್ಗಿಸುವುದು ಮತ್ತು ಜೋಡಿಸುವುದು ಮುಂತಾದ ದಾಸರಿಗೆ ನೀಡಲಾದ ಸರಳೀಕರಣಗಳನ್ನು ಅವರು ಸ್ವೀಕರಿಸುವುದನ್ನು ಅವನು ಇಷ್ಟ ಪಡುತ್ತಾನೆ. ಕಡ್ಡಾಯ ಕರ್ಮಗಳನ್ನು ದೃಢ ನಿರ್ಧಾರದಿಂದ ನಿರ್ವಹಿಸುವುದನ್ನು ಅವನು ಇಷ್ಟಪಡುವಂತೆ. ಏಕೆಂದರೆ, ರಿಯಾಯಿತಿಗಳಲ್ಲಿ ಮತ್ತು ದೃಢ ನಿರ್ಧಾರಗಳಲ್ಲಿ ಅಲ್ಲಾಹನ ಆಜ್ಞೆಯು ಒಂದೇ ಆಗಿದೆ.
ಖುರೈಮ್ ಬಿನ್ ಫಾತಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳು ಎಂದರೆ: ಯಾರು ಅಲ್ಲಾಹನಲ್ಲಿ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಯಾರು ಅಲ್ಲಾಹನಲ್ಲಿ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುತ್ತಾರೋ ಅವರು ನರಕವನ್ನು ಪ್ರವೇಶಿಸುತ್ತಾರೆ. ತದ್ರೂಪವಾದ ವಿಷಯವೇನೆಂದರೆ: ಒಬ್ಬ ವ್ಯಕ್ತಿ ಒಂದು ಉತ್ತಮ ಕಾರ್ಯವನ್ನು ಮಾಡಲು ಉದ್ದೇಶಿಸಿ, ಅವನ ಹೃದಯವು ಅದನ್ನು ಅನುಭವಿಸಿದರೆ ಮತ್ತು ಅಲ್ಲಾಹು ಅವನ ಉದ್ದೇಶವನ್ನು ತಿಳಿದರೆ (ಅವನು ಆ ಕಾರ್ಯವನ್ನು ಮಾಡದಿದ್ದರೂ) ಅಲ್ಲಾಹು ಅವನಿಗೆ ಒಂದು ಪ್ರತಿಫಲವನ್ನು ದಾಖಲಿಸುತ್ತಾನೆ. ಒಬ್ಬ ವ್ಯಕ್ತಿ ಒಂದು ದುಷ್ಕರ್ಮವನ್ನು ಮಾಡಿದರೆ ಅಲ್ಲಾಹು ಅವನಿಗೆ ಒಂದು ದುಷ್ಕರ್ಮ ಮಾಡಿದ ಪ್ರತಿಫಲವನ್ನು ದಾಖಲಿಸುತ್ತಾನೆ. ಒಬ್ಬ ವ್ಯಕ್ತಿ ಒಂದು ಸತ್ಕರ್ಮವನ್ನು ಮಾಡಿದರೆ ಅಲ್ಲಾಹು ಅವನಿಗೆ ಹತ್ತು ಪಟ್ಟು ಸತ್ಕರ್ಮಗಳನ್ನು ಮಾಡಿದ ಪುಣ್ಯವನ್ನು ದಾಖಲಿಸುತ್ತಾನೆ. ಒಬ್ಬ ವ್ಯಕ್ತಿ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದರೆ ಅಲ್ಲಾಹು ಅವನಿಗೆ ಏಳು ನೂರು ಒಳಿತುಗಳನ್ನು ಮಾಡಿದ ಪುಣ್ಯವನ್ನು ದಾಖಲಿಸುತ್ತಾನೆ. ಮನುಷ್ಯರಲ್ಲಿರುವ ವರ್ಗಗಳು ಯಾವುದೆಂದರೆ: ಇಹಲೋಕದಲ್ಲಿ ವಿಶಾಲವಾದ ಜೀವನವನ್ನು ಮತ್ತು ಪರಲೋಕದಲ್ಲಿ ಇಕ್ಕಟ್ಟಾದ ಜೀವನವನ್ನು ಪಡೆಯುವವನು, ಇಹಲೋಕದಲ್ಲಿ ಇಕ್ಕಟ್ಟಾದ ಜೀವನವನ್ನು ಮತ್ತು ಪರಲೋಕದಲ್ಲಿ ವಿಶಾಲವಾದ ಜೀವನವನ್ನು ಪಡೆಯುವವನು, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಇಕ್ಕಟ್ಟಾದ ಜೀವನವನ್ನು ಪಡೆಯುವವನು, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ವಿಶಾಲವಾದ ಜೀವನವನ್ನು ಪಡೆಯುವವನು."
Ahmadಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕರ್ಮಗಳಲ್ಲಿ ಆರು ವಿಧಗಳಿವೆ ಮತ್ತು ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ ಎಂದು ತಿಳಿಸುತ್ತಾರೆ. ಕರ್ಮಗಳಲ್ಲಿರುವ ಆರು ವಿಧಗಳು ಯಾವುದೆಂದರೆ: ಒಂದು: ಒಬ್ಬ ವ್ಯಕ್ತಿ ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದೆ ಮರಣ ಹೊಂದಿದರೆ ಅವನಿಗೆ ಸ್ವರ್ಗ ಕಡ್ಡಾಯವಾಗಿದೆ. ಎರಡು: ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಮರಣ ಹೊಂದುವವನಿಗೆ ನರಕ ಕಡ್ಡಾಯವಾಗಿದೆ. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾನೆ. ಇವೆರಡು ಕಡ್ಡಾಯಗೊಳಿಸುವ ಕಾರ್ಯಗಳಾಗಿವೆ. ಮೂರು: ಒಳಿತು ಮಾಡುವ ಉದ್ದೇಶವನ್ನು ಹೊಂದಿರುವುದು. ಒಬ್ಬನು ಒಳಿತು ಮಾಡುವ ಉದ್ದೇಶವನ್ನು ಹೊಂದಿದ್ದು, ತನ್ನ ಉದ್ದೇಶದಲ್ಲಿ ಸತ್ಯವಂತನಾಗಿದ್ದರೆ, ಮತ್ತು ಅವನ ಹೃದಯದ ಮೂಲಕ ಅವನು ಅದನ್ನು ಅನುಭವಿಸಿದರೆ, ಮತ್ತು ಅವನ ಉದ್ದೇಶವು ಸತ್ಯವೆಂದು ಅಲ್ಲಾಹು ತಿಳಿದರೆ, ಯಾವುದೋ ಅಡ್ಡಿಯಿಂದಾಗಿ ಅವನಿಗೆ ಆ ಒಳಿತನ್ನು ಮಾಡಲು ಸಾಧ್ಯವಾಗದಿದ್ದರೂ ಸಹ, ಅಲ್ಲಾಹು ಅವನಿಗೆ ಒಂದು ಪೂರ್ಣ ಒಳಿತನ್ನು ಮಾಡಿದ ಪ್ರತಿಫಲವನ್ನು ದಾಖಲಿಸುತ್ತಾನೆ. ನಾಲ್ಕು: ಕೆಡುಕು ಮಾಡುವ ಉದ್ದೇಶವನ್ನು ಹೊಂದಿರುವುದು. ಒಂದು ಕೆಡುಕು ಮಾಡಿದವನಿಗೆ ಒಂದೇ ಒಂದು ಕೆಡುಕು ಮಾಡಿದ ಪ್ರತಿಫಲವನ್ನು ಮಾತ್ರ ದಾಖಲಿಸಲಾಗುತ್ತದೆ. ಇವು ತದ್ರೂಪ ಪ್ರತಿಫಲವಿರುವ ವಿಷಯಗಳಾಗಿದ್ದು ಇವುಗಳಿಗೆ ಹೆಚ್ಚುವರಿ ಪುಣ್ಯವಿಲ್ಲ. ಐದು: ಒಂದು ಒಳಿತು ಮಾಡಿದರೆ ಹತ್ತು ಒಳಿತು ಮಾಡಿದ ಪ್ರತಿಫಲವನ್ನು ದಾಖಲಿಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಒಂದು ಒಳಿತು ಮಾಡುವ ಉದ್ದೇಶವನ್ನು ಹೊಂದಿದ್ದು ಅವನು ಅದನ್ನು ಮಾಡಿದರೆ ಅವನಿಗೆ ಹತ್ತು ಒಳಿತುಗಳನ್ನು ಮಾಡಿದ ಪುಣ್ಯವನ್ನು ದಾಖಲಿಸಲಾಗುತ್ತದೆ. ಆರು: ಏಳುನೂರು ಪಟ್ಟು ಪ್ರತಿಫಲವಿರುವ ಒಳಿತು. ಅಂದರೆ ಒಬ್ಬ ವ್ಯಕ್ತಿ ಅಲ್ಲಾಹನ ಮಾರ್ಗದಲ್ಲಿ ಒಂದು ರೂಪಾಯಿ ಖರ್ಚು ಮಾಡಿದರೆ ಅವನಿಗೆ ಏಳು ನೂರು ರೂಪಾಯಿ ಖರ್ಚು ಮಾಡಿದ ಪುಣ್ಯವನ್ನು ದಾಖಲಿಸಲಾಗುತ್ತದೆ. ಇದು ಸರ್ವಶಕ್ತನಾದ ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಅನುಗ್ರಹ ಮತ್ತು ಉದಾರತೆಯಾಗಿದೆ. ಮನುಷ್ಯರಲ್ಲಿರುವ ನಾಲ್ಕು ವರ್ಗಗಳು ಹೀಗಿವೆ: ಒಂದು: ಇಹಲೋಕದಲ್ಲಿ ವಿಶಾಲವಾದ ಜೀವನೋಪಾಯವನ್ನು ಹೊಂದಿರುವವನು, ತನಗೆ ಬೇಕಾದ ಎಲ್ಲವನ್ನೂ ಪಡೆದಿರುವವನು. ಆದರೆ ಪರಲೋಕದಲ್ಲಿ ಅವನ ಸ್ಥಿತಿಯು ಬಹಳ ಇಕ್ಕಟ್ಟಾಗಿರುತ್ತದೆ ಮತ್ತು ಅವನು ನರಕಕ್ಕೆ ಹೋಗಿ ತಲುಪುತ್ತಾನೆ. ಉದಾಹರಣೆಗೆ ಶ್ರೀಮಂತ ಸತ್ಯನಿಷೇಧಿ. ಎರಡು: ಇಹಲೋಕದಲ್ಲಿ ಬಹಳ ಇಕ್ಕಟ್ಟಾದ ಜೀವನೋಪಾಯವನ್ನು ಹೊಂದಿರುವವನು. ಆದರೆ ಪರಲೋಕದಲ್ಲಿ ಅವನ ಸ್ಥಿತಿಯು ಬಹಳ ವಿಶಾಲವಾಗಿದೆ ಮತ್ತು ಅವನು ಸ್ವರ್ಗಕ್ಕೆ ತಲುಪುತ್ತಾನೆ. ಉದಾಹರಣೆಗೆ ಬಡ ಸತ್ಯವಿಶ್ವಾಸಿ. ಮೂರು: ಇಹಲೋಕದಲ್ಲೂ ಪರಲೋಕದಲ್ಲೂ ಬಹಳ ಇಕ್ಕಟ್ಟನ್ನು ಅನುಭವಿಸುವವನು. ಉದಾಹರಣೆಗೆ ಬಡ ಸತ್ಯನಿಷೇಧಿ. ನಾಲ್ಕು:ಇಹಲೋಕದಲ್ಲೂ ಪರಲೋಕದಲ್ಲೂ ಬಹಳ ವಿಶಾಲತೆಯನ್ನು ಅನುಭವಿಸುವವನು.ಉದಾಹರಣೆಗೆ ಶ್ರೀಮಂತ ಸತ್ಯವಿಶ್ವಾಸಿ.
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಚಿಕ್ಕ ಮತ್ತು ದೊಡ್ಡ ಯಾವುದೇ ಪಾಪಗಳನ್ನು ಮಾಡದೆ ಬಿಟ್ಟಿಲ್ಲ." ಅವರು ಕೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?" ಅವರು ಇದನ್ನು ಮೂರು ಬಾರಿ ಕೇಳಿದರು. ಆ ವ್ಯಕ್ತಿ ಹೌದು ಎಂದು ಉತ್ತರಿಸಿದರು. ಅವರು ಹೇಳಿದರು: "ನಿಶ್ಚಯವಾಗಿಯೂ ಇದು ಅದರ ಮೇಲೆ ಬರುತ್ತದೆ."
Abu Ya‘laaಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಎಲ್ಲಾ ಪಾಪಗಳನ್ನು ಮತ್ತು ದೋಷಗಳನ್ನು ಮಾಡಿದ್ದೇನೆ. ಚಿಕ್ಕ ಮತ್ತು ದೊಡ್ಡ ಪಾಪಗಳಲ್ಲಿ ಯಾವುದನ್ನು ನಾನು ಮಾಡದೆ ಬಿಟ್ಟಿಲ್ಲ. ನನಗೆ ಕ್ಷಮೆ ಸಿಗಬಹುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುತ್ತಾರೆ: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?" ಅವರು ಇದನ್ನು ಮೂರು ಬಾರಿ ಕೇಳಿದರು. ಆಗ ಆ ವ್ಯಕ್ತಿ: "ಹೌದು, ನಾನು ಸಾಕ್ಷಿ ವಹಿಸುತ್ತೇನೆ" ಎಂದು ಉತ್ತರಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸಾಕ್ಷಿ ವಚನಗಳ ಶ್ರೇಷ್ಠತೆಯನ್ನು ಮತ್ತು ಅದು ಪಾಪಗಳನ್ನು ಪರಿಹರಿಸುತ್ತದೆ ಎಂದು ತಿಳಿಸಿದರು. ಹಾಗೆಯೇ ಪಶ್ಚಾತಾಪವು ಅದರ ಮುಂಚಿನ ಪಾಪಗಳನ್ನು ಅಳಿಸುತ್ತದೆ ಎಂದರು.