





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯುತ್ತಮ ನಡವಳಿಕೆಯನ್ನು ಹೊಂದಿದವರಾಗಿದ್ದರು."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಪರಿಪೂರ್ಣವಾದ ನಡವಳಿಕೆಯನ್ನು ಹೊಂದಿದ್ದರು. ಉತ್ತಮ ರೀತಿಯಲ್ಲಿ ಮಾತನಾಡುವುದು, ಜನರಿಗೆ ಒಳಿತು ಮಾಡುವುದು, ಮಂದಹಾಸ ಬೀರುವುದು, ಜನರಿಗೆ ತೊಂದರೆ ಕೊಡದಿರುವುದು, ಜನರಿಂದ ಉಂಟಾಗುವ ತೊಂದರೆಗಳನ್ನು ಸಹಿಸುವುದು ಮುಂತಾದ ಎಲ್ಲಾ ಉತ್ತಮ ನಡವಳಿಕೆಗಳಲ್ಲೂ ಅವರು ಮುಂಚೂಣಿಯಲ್ಲಿದ್ದರು.
ಸಅದ್ ಬಿನ್ ಹಿಶಾಮ್ ಬಿನ್ ಆಮಿರ್ – ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಹೋದಾಗ ಹೇಳಿದರು: "ಓ ಸತ್ಯವಿಶ್ವಾಸಿಗಳ ತಾಯಿಯವರೇ! ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಕೇಳಿದರು: "ನೀವು ಪವಿತ್ರ ಕುರ್ಆನ್ ಪಠಿಸುವುದಿಲ್ಲವೇ?" ನಾನು ಹೇಳಿದೆ: "ಪಠಿಸುತ್ತೇನೆ." ಅವರು ಹೇಳಿದರು: "ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್ಆನ್ ಆಗಿದೆ."
Muslimಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಲಾದಾಗ ಅವರು ಒಂದು ಸಮಗ್ರ ವಾಕ್ಯದ ಮೂಲಕ ಉತ್ತರಿಸಿದರು. ಅವರು ಪ್ರಶ್ನೆ ಕೇಳಿದವನ ಗಮನವನ್ನು ಎಲ್ಲಾ ರೀತಿಯ ಸಂಪೂರ್ಣತೆಯ ನಡವಳಿಕೆಗಳನ್ನು ಒಳಗೊಂಡಿರುವ ಪವಿತ್ರ ಕುರ್ಆನ್ನ ಕಡೆಗೆ ತಿರುಗಿಸಿ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಿತ್ರ ಕುರ್ಆನನ್ನು ತಮ್ಮ ನಡವಳಿಕೆಯಾಗಿ ಮಾಡಿಕೊಂಡಿದ್ದಾರೆ; ಅದು ಆಜ್ಞಾಪಿಸುವುದನ್ನು ಅವರು ನಿರ್ವಹಿಸುತ್ತಾರೆ ಮತ್ತು ಅದು ವಿರೋಧಿಸುವುದರಿಂದ ಅವರು ದೂರ ಸರಿಯುತ್ತಾರೆ. ಪವಿತ್ರ ಕುರ್ಆನ್ನಲ್ಲಿರುವ ಪ್ರಕಾರ ಕಾರ್ಯವೆಸಗುವುದು, ಅದು ನಿಲ್ಲಲು ಹೇಳಿದಲ್ಲಿ ನಿಲ್ಲುವುದು, ಅದು ತೋರಿಸಿದ ಶಿಷ್ಟಾಚಾರಗಳನ್ನು ಪಾಲಿಸುವುದು ಮತ್ತು ಅದರಲ್ಲಿರುವ ಉದಾಹರಣೆಗಳು ಮತ್ತು ಕಥೆಗಳಿಂದ ನೀತಿಪಾಠವನ್ನು ಕಲಿತುಕೊಳ್ಳುವುದು ಅವರ ನಡವಳಿಕೆಯಾಗಿದೆ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಲ್ವತ್ತು ವರ್ಷ ಪ್ರಾಯವಾದಾಗ ಅವರಿಗೆ ಕುರ್ಆನ್ ಅವತೀರ್ಣವು ಆರಂಭವಾಯಿತು. ಅವರು ಮಕ್ಕಾದಲ್ಲಿ ಹದಿಮೂರು ವರ್ಷ ತಂಗಿದರು. ನಂತರ ಅವರಿಗೆ ಹಿಜ್ರ (ವಲಸೆ) ಮಾಡಲು ಆದೇಶ ಬಂತು. ಅವರು ಮದೀನಕ್ಕೆ ಹಿಜ್ರ ಮಾಡಿದರು. ಅಲ್ಲಿ ಅವರು ಹತ್ತು ವರ್ಷ ತಂಗಿದರು. ನಂತರ ಅವರು ನಿಧನರಾದರು."
Al-Bukhari and Muslimಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ: ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಲ್ವತ್ತು ವರ್ಷ ಪ್ರಾಯವಾದಾಗ ಅವರಿಗೆ ಕುರ್ಆನ್ ಅವತೀರ್ಣವು ಪ್ರಾರಂಭವಾಗಿ ಅವರು ಪ್ರವಾದಿಯಾದರು. ಪ್ರವಾದಿಯಾದ ಬಳಿಕ ಹದಿಮೂರು ವರ್ಷ ಅವರ ಮಕ್ಕಾದಲ್ಲಿ ತಂಗಿದ್ದರು. ನಂತರ ಅವರಿಗೆ ಮದೀನಕ್ಕೆ ಹಿಜ್ರ ಮಾಡಲು ಆದೇಶಿಸಲಾಯಿತು. ಅಲ್ಲಿ ಅವರು ಹತ್ತು ವರ್ಷ ತಂಗಿದರು. ನಂತರ ಅವರು ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.
ಝೈದ್ ಬಿನ್ ಖಾಲಿದ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುದೈಬಿಯಾದಲ್ಲಿ ನಮ್ಮೊಡನೆ ಫಜ್ರ್ ನಮಾಝ್ ನಿರ್ವಹಿಸಿದರು. ಅದರ ಹಿಂದಿನ ರಾತ್ರಿ ಮಳೆ ಸುರಿದಿತ್ತು. ನಮಾಝ್ ನಿರ್ವಹಿಸಿದ ಬಳಿಕ ಅವರು ಜನರ ಕಡೆಗೆ ತಿರುಗಿ ಕೇಳಿದರು: "ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "(ಅಲ್ಲಾಹು ಹೇಳಿದನು): ನನ್ನ ದಾಸರಲ್ಲಿ ಕೆಲವರು ಸತ್ಯವಿಶ್ವಾಸಿಗಳಾಗಿ ಮತ್ತು ಕೆಲವರು ಸತ್ಯನಿಷೇಧಿಗಳಾಗಿ ಬೆಳಗನ್ನು ಪ್ರವೇಶಿಸಿದ್ದಾರೆ. ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನಲ್ಲಿ ವಿಶ್ವಾಸವಿಟ್ಟನು ಮತ್ತು ನಕ್ಷತ್ರಗಳನ್ನು ನಿಷೇಧಿಸಿದನು. ಇಂತಿಂತಹ ನಕ್ಷತ್ರದ ಉದಯದಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನನ್ನು ನಿಷೇಧಿಸಿದನು ಮತ್ತು ನಕ್ಷತ್ರಗಳಲ್ಲಿ ವಿಶ್ವಾಸವಿಟ್ಟನು."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುದೈಬಿಯಾದಲ್ಲಿ ಫಜ್ರ್ ನಮಾಝ್ ನಿರ್ವಹಿಸಿದರು. ಹುದೈಬಿಯಾ ಮಕ್ಕಾದ ಬಳಿಯಿರುವ ಒಂದು ಹಳ್ಳಿ. ಅದರ ಹಿಂದಿನ ರಾತ್ರಿ ಅಲ್ಲಿ ಮಳೆ ಸುರಿದಿತ್ತು. ಸಲಾಂ ಹೇಳಿ ನಮಾಝ್ ಮುಗಿಸಿದ ಬಳಿಕ ಅವರು ಜನರ ಕಡೆಗೆ ತಿರುಗಿ ಕೇಳಿದರು: "ಸರ್ವಶಕ್ತನಾದ ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಉತ್ತರಿಸಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಮಳೆಯ ವಿಷಯದಲ್ಲಿ ಜನರಲ್ಲಿ ಎರಡು ವಿಭಾಗಗಳಿದ್ದು, ಒಂದು ವಿಭಾಗವು ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುತ್ತದೆ ಮತ್ತು ಇನ್ನೊಂದು ವಿಭಾಗವು ಸರ್ವಶಕ್ತನಾದ ಅಲ್ಲಾಹನನ್ನು ನಿಷೇಧಿಸುತ್ತದೆ ಎಂದು ಸರ್ವಶಕ್ತನಾದ ಅಲ್ಲಾಹು ವಿವರಿಸಿದ್ದಾನೆ. ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿದಿದೆ ಎಂದು ಹೇಳಿದವನು ಮಳೆ ಸುರಿಯುವುದನ್ನು ಅಲ್ಲಾಹನಿಗೆ ಸೇರಿಸಿದ್ದಾನೆ. ಅವನು ಸೃಷ್ಟಿಕರ್ತ ಮತ್ತು ಪ್ರಪಂಚ ನಿಯಂತ್ರಕನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದಾನೆ ಮತ್ತು ನಕ್ಷತ್ರಗಳನ್ನು ನಿಷೇಧಿಸಿದ್ದಾನೆ. ಇಂತಿಂತಹ ನಕ್ಷತ್ರದ ಉದಯದಿಂದ ಮಳೆ ಸುರಿದಿದೆ ಎಂದು ಹೇಳಿದವನು ಅಲ್ಲಾಹನನ್ನು ನಿಷೇಧಿಸಿದ್ದಾನೆ ಮತ್ತು ನಕ್ಷತ್ರಗಳಲ್ಲಿ ವಿಶ್ವಾಸವಿಟ್ಟಿದ್ದಾನೆ. ಇದು ಚಿಕ್ಕ ಸತ್ಯನಿಷೇಧ (ಕುಫ್ರ್ ಅಸ್ಗರ್) ಆಗಿದೆ. ಏಕೆಂದರೆ ಇಲ್ಲಿ ಮಳೆ ಸುರಿಯುವುದನ್ನು ನಕ್ಷತ್ರಗಳಿಗೆ ಸೇರಿಸಿ ಹೇಳಲಾಗಿದೆ. ಮಳೆ ಸುರಿಯಲು ಅಲ್ಲಾಹು ನಕ್ಷತ್ರಗಳನ್ನು ಧಾರ್ಮಿಕವಾಗಿ ಅಥವಾ ದೈವಿಕ ವಿಧಿಗೆ ಸಂಬಂಧಿಸಿ ಕಾರಣವನ್ನಾಗಿ ಮಾಡಿಲ್ಲ. ಆದರೆ ಯಾರು ಮಳೆ ಸುರಿಯುವುದನ್ನು ಅಥವಾ ಭೂಮಿಯಲ್ಲಿ ನಡೆಯುವ ಇತರ ವಿದ್ಯಮಾನಗಳನ್ನು ನಕ್ಷತ್ರಗಳ ಉದಯ ಮತ್ತು ಅಸ್ತಮಕ್ಕೆ ಸೇರಿಸಿ, ಇವೆಲ್ಲವೂ ನಕ್ಷತ್ರಗಳ ಚಲನೆಯಿಂದ ಸಂಭವಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದರೆ ಅವನು ದೊಡ್ಡ ಸತ್ಯನಿಷೇಧವನ್ನು (ಕುಫ್ರ್ ಅಕ್ಬರ್) ಮಾಡಿದ ಸತ್ಯನಿಷೇಧಿಯಾಗಿದ್ದಾನೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಲ್ಲಿ ಸೇರಿದ ಕೆಲವರು ಅವರ ಬಳಿಗೆ ಬಂದು ಹೇಳಿದರು: "ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು) ಅನುಭವಿಸಿದ್ದೀರಾ?" ಅವರು ಹೌದೆಂದು ಉತ್ತರಿಸಿದರು. ಅವರು ಹೇಳಿದರು: "ಅದು ನಿರ್ಮಲ ಸತ್ಯವಿಶ್ವಾಸವಾಗಿದೆ."
Muslimಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಲ್ಲಿ ಒಂದು ಗುಂಪು ಜನರು ಅವರ ಬಳಿಗೆ ಬಂದು, ಅವರು ಮಾತನಾಡಲು ಭಯಪಡುವಂತಹ ಅತ್ಯಂತ ಮ್ಲೇಚ್ಛ ಮತ್ತು ಅಸಹ್ಯಕರ ವಿಚಾರಗಳು ಅವರ ಮನಸ್ಸುಗಳಲ್ಲಿ ಮೂಡುತ್ತವೆ ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅನುಭವಿಸುತ್ತಿರುವುದು ನಿರ್ಮಲ ಸತ್ಯವಿಶ್ವಾಸ ಮತ್ತು ದೃಢ ವಿಶ್ವಾಸವನ್ನಾಗಿದೆ. ಶೈತಾನನು ನಿಮ್ಮ ಹೃದಯದಲ್ಲಿ ಹಾಕುತ್ತಿರುವ ದುರ್ಭೋದನೆಗಳನ್ನು ತಡಗಟ್ಟಲು ಅದು ನಿಮ್ಮನ್ನು ಉತ್ತೇಜಿಸುತ್ತದೆ ಮತ್ತು ನೀವು ಅದರ ಬಗ್ಗೆ ಮಾತನಾಡಲು ಭಯಪಡುವಂತೆ ಮಾಡುತ್ತದೆ. ಶೈತಾನನಿಗೆ ನಿಮ್ಮ ಹೃದಯಗಳ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಶೈತಾನನ ಹತೋಟಿಯಲ್ಲಿರುವ ಹೃದಯಗಳಲ್ಲಿ ಇಂತಹ ಅನುಭವವಾಗುವುದಿಲ್ಲ."
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬನ ಮನಸ್ಸಿನಲ್ಲಿ ಕೆಲವು ದುರ್ವಿಚಾರಗಳು ಮೂಡುತ್ತವೆ. ಅವುಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಇದ್ದಿಲುಗಳಾಗಿ ಮಾರ್ಪಡುವುದೇ ಅವನಿಗೆ ಹೆಚ್ಚು ಇಷ್ಟವಾಗಿದೆ." ಆಗ ಅವರು ಹೇಳಿದರು: "ಅಲ್ಲಾಹು ಮಹಾನನು, ಅಲ್ಲಾಹು ಮಹಾನನು. ಶೈತಾನನ ಕುತಂತ್ರವನ್ನು ದುರ್ಬೋಧನೆಯಾಗಿ ಮಾರ್ಪಡಿಸಿದ ಅಲ್ಲಾಹನಿಗೆ ಸರ್ವಸ್ತುತಿ."
Abu Dawoodಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬನು ತನ್ನ ಮನಸ್ಸಿನಲ್ಲಿ ಕೆಲವು ದುರ್ವಿಚಾರಗಳು ಬಂದು ಹೋಗುವಂತೆ ಅನುಭವಿಸುತ್ತಾನೆ. ಅವುಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಬೂದಿಯಾಗಿ ಮಾರ್ಪಡುವುದೇ ಅವನಿಗೆ ಹೆಚ್ಚು ಇಷ್ಟವಾಗಿದೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಬಾರಿ ಅಲ್ಲಾಹು ಮಹಾನನು ಎಂದು ಹೇಳಿದರು. ನಂತರ, ಶೈತಾನನ ಕುತಂತ್ರವನ್ನು ಕೇವಲ ದುರ್ಭೋದನೆಯಾಗಿ ಮಾರ್ಪಡಿಸಿದ ಅಲ್ಲಾಹನಿಗೆ ಸ್ತುತಿಯನ್ನು ಅರ್ಪಿಸಿದರು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ."
Al-Bukhari and Muslimಶೈತಾನನು ಸತ್ಯವಿಶ್ವಾಸಿಯ ಮನಸ್ಸಿನಲ್ಲಿ ಪಿಸುಗುಡುವ ಇಂತಹ ಪ್ರಶ್ನೆಗಳಿಗೆ ಔಷಧಿಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ತಿಳಿಸುತ್ತಿದ್ದಾರೆ ಶೈತಾನನು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು? ಆಕಾಶವನ್ನು ಸೃಷ್ಟಿಸಿದ್ದು ಯಾರು? ಭೂಮಿಯನ್ನು ಸೃಷ್ಟಿಸಿದ್ದು ಯಾರು?" ಆಗ ಸತ್ಯವಿಶ್ವಾಸಿಯು ಧಾರ್ಮಿಕ, ನೈಸರ್ಗಿಕ, ಮತ್ತು ಬೌದ್ಧಿಕ ಆಧಾರದಲ್ಲಿ "ಅಲ್ಲಾಹು" ಎಂದು ಉತ್ತರಿಸುತ್ತಾನೆ. ಆದರೆ ಶೈತಾನನು ತನ್ನ ದುರ್ಭೋದನೆಗಳನ್ನು ಅಲ್ಲಿಗೆ ನಿಲ್ಲಿಸುವುದಿಲ್ಲ. ಬದಲಿಗೆ ಮುಂದುವರಿಯುತ್ತಾ ಕೇಳುತ್ತಾನೆ: "ಅಲ್ಲಾಹನನ್ನು ಸೃಷ್ಟಿಸಿದ್ದು ಯಾರು?" ಆಗ ಸತ್ಯವಿಶ್ವಾಸಿಯು ಮೂರು ರೀತಿಗಳಲ್ಲಿ ಈ ದುರ್ಭೋದನೆಯನ್ನು ತಡೆಗಟ್ಟಬೇಕು: ಅಲ್ಲಾಹನಲ್ಲಿರುವ ವಿಶ್ವಾಸದಿಂದ. ಅಲ್ಲಾಹನಲ್ಲಿ ಶೈತಾನನಿಂದ ಅಭಯ ಕೋರುವ ಮೂಲಕ. ದುರ್ಬೋಧನೆಯೊಂದಿಗೆ ಮುಂದುವರಿಯುವುದನ್ನು ನಿಲ್ಲುವ ಮೂಲಕ.
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ, ಒಳಿತಿನ ವಿಷಯದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗೆ ಅನ್ಯಾಯ ಮಾಡುವುದಿಲ್ಲ. ಒಳಿತು ಮಾಡಿದ್ದಕ್ಕಾಗಿ ಅವನಿಗೆ ಇಹಲೋಕದಲ್ಲಿ (ಜೀವನೋಪಾಯವನ್ನು) ನೀಡಲಾಗುತ್ತದೆ ಮತ್ತು ಪರಲೋಕದಲ್ಲೂ ಪ್ರತಿಫಲ ನೀಡಲಾಗುತ್ತದೆ. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಅಲ್ಲಾಹನ ಸಂಪ್ರೀತಿಗಾಗಿ ಮಾಡಿದ ಒಳಿತುಗಳಿಗಾಗಿ ಅವನಿಗೆ ಆಹಾರವನ್ನು ನೀಡಲಾಗುವುದು. ಹೀಗೆ ಅವನು ಪರಲೋಕಕ್ಕೆ ತಲುಪಿದಾಗ, ಪ್ರತಿಫಲ ನೀಡಲಾಗುವ ಯಾವುದೇ ಒಳಿತುಗಳು ಅವನಲ್ಲಿ ಉಳಿದಿರುವುದಿಲ್ಲ."
Muslimಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ಮೇಲೆ ಅಲ್ಲಾಹನಿಗಿರುವ ಮಹಾ ಉದಾರತೆಯನ್ನು, ಮತ್ತು ಸತ್ಯನಿಷೇಧಿಗಳೊಂದಿಗೆ ಅವನು ತೋರಿಸುವ ನ್ಯಾಯವನ್ನು ವಿವರಿಸುತ್ತಾರೆ. ಸತ್ಯವಿಶ್ವಾಸಿ ಮಾಡಿದ ಯಾವುದೇ ಸತ್ಕರ್ಮದ ಪ್ರತಿಫಲವು ಅವನಿಗೆ ನಷ್ಟವಾಗುವುದಿಲ್ಲ. ಬದಲಿಗೆ, ಪರಲೋಕದಲ್ಲಿ ಅವನಿಗೆ ಪ್ರತಿಫಲ ನೀಡಲಾಗುವುದರ ಜೊತೆಗೆ ಇಹಲೋಕದಲ್ಲೂ ಅವನು ತೋರಿದ ವಿಧೇಯತೆಗೆ ಅವನಿಗೆ ಪ್ರತಿಫಲವನ್ನು ನೀಡಲಾಗುತ್ತದೆ. ಪರಲೋಕದಲ್ಲಿ ಅವೆಲ್ಲದರ ಪ್ರತಿಫಲವನ್ನು ಅವನಿಗೆ ಸಂರಕ್ಷಿಸಿ ಇಡಲಾಗುವುದು. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಮಾಡಿದ ಒಳಿತುಗಳಿಗೆ ಅಲ್ಲಾಹು ಇಹಲೋಕದಲ್ಲೇ ಪ್ರತಿಫಲವನ್ನು ನೀಡುವನು. ಹೀಗೆ ಅವನು ಪರಲೋಕಕ್ಕೆ ತಲುಪಿದರೆ ಅಲ್ಲಿ ಅವನಿಗೆ ನೀಡಲು ಯಾವುದೇ ಪ್ರತಿಫಲವು ಉಳಿದಿರುವುದಿಲ್ಲ. ಏಕೆಂದರೆ ಸತ್ಕರ್ಮಗಳಿಗೆ ಪರಲೋಕದಲ್ಲಿ ಪ್ರತಿಫಲ ಸಿಗಬೇಕಾದರೆ ಅದನ್ನು ಮಾಡುವ ವ್ಯಕ್ತಿ ಸತ್ಯವಿಶ್ವಾಸಿಯಾಗಿರಬೇಕು.
ಕತಾದ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು: ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮಗೆ ತಿಳಿಸಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಪ್ರವಾದಿಯವರೇ! ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಅವರು ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಕತಾದ ಹೇಳುತ್ತಾರೆ: "ಖಂಡಿತ ಸಾಮರ್ಥ್ಯವಿದೆ. ನಮ್ಮ ಪರಿಪಾಲಕನ (ಅಲ್ಲಾಹನ) ಪ್ರತಿಷ್ಠೆಯ ಮೇಲಾಣೆ!"
Al-Bukhari and Muslimಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: "ಪುನರುತ್ಥಾನ ದಿನದಂದು ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.