Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way






























Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರ ನಡವಳಿಕೆಯು ಅತ್ಯುತ್ತಮವಾಗಿದೆಯೋ ಅವನು ಜನರಲ್ಲೇ ಪರಿಪೂರ್ಣ ವಿಶ್ವಾಸವನ್ನು ಹೊಂದಿರುವವನಾಗಿದ್ದಾನೆ. ಅತ್ಯುತ್ತಮ ನಡವಳಿಕೆ ಎಂದರೆ ಮಂದಹಾಸ ಬೀರುವುದು, ಜನರಿಗೆ ಒಳಿತು ಮಾಡುವುದು, ಒಳ್ಳೆಯ ಮಾತುಗಳನ್ನಾಡುವುದು ಮತ್ತು ಜನರಿಗೆ ತೊಂದರೆ ಕೊಡದಿರುವುದು. ಸತ್ಯವಿಶ್ವಾಸಿಗಳಲ್ಲಿ ಶ್ರೇಷ್ಠನು ತನ್ನ ಮಹಿಳೆಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನು. ಮಹಿಳೆಯರು ಎಂದರೆ ಅವನ ಪತ್ನಿಯರು, ಹೆಣ್ಣುಮಕ್ಕಳು, ಸಹೋದರಿಯರು ಮತ್ತು ಹತ್ತಿರದ ಸಂಬಂಧಿ ಸ್ತ್ರೀಯರು, ನಿಮ್ಮ ಅತ್ಯುತ್ತಮ ವರ್ತನೆಗೆ ಇತರೆಲ್ಲ ಜನರಿಗಿಂತಲೂ ಇವರು ಅತ್ಯಂತ ಹಕ್ಕುಳ್ಳವರಾಗಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕ ಮತ್ತು ಅದರಲ್ಲಿರುವ ವಸ್ತುಗಳು ಸ್ವಲ್ಪ ಸಮಯದವರೆಗೆ ಆನಂದಿಸುವ ಮತ್ತು ನಂತರ ಕೊನೆಗೊಳ್ಳುವ ವಿಷಯಗಳಾಗಿವೆ. ಧರ್ಮನಿಷ್ಠೆಯಾದ ಪತ್ನಿ ಇವುಗಳಲ್ಲಿ ಅತಿಶ್ರೇಷ್ಠ ಆನಂದವಾಗಿದ್ದಾಳೆ. ಧರ್ಮನಿಷ್ಠೆ ಪತ್ನಿ ಯಾರೆಂದರೆ ಗಂಡ ಅವಳನ್ನು ನೋಡಿದಾಗ ಅವಳು ಅವನಿಗೆ ಸಂತೋಷಪಡಿಸುತ್ತಾಳೆ, ಅವನು ಏನಾದರೂ ಆಜ್ಞಾಪಿಸಿದರೆ ಅವಳು ಅನುಸರಿಸುತ್ತಾಳೆ ಮತ್ತು ಅವನ ಅನುಪಸ್ಥಿತಿಯಲ್ಲಿ ಅವಳು ತನ್ನ ಮಾನವನ್ನು ಮತ್ತು ಅವನ ಆಸ್ತಿಯನ್ನು ಸಂರಕ್ಷಿಸುತ್ತಾಳೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಆದಮನ ಮಗನೇ! ಕಡ್ಡಾಯ ಮತ್ತು ಅಪೇಕ್ಷಣೀಯವಾದ ಎಲ್ಲಾ ಖರ್ಚುಗಳನ್ನು ಮಾಡು. ನೀನು ಖರ್ಚು ಮಾಡಿದರೆ ನಾನು ನಿನ್ನ ಜೀವನೋಪಾಯವನ್ನು ವಿಶಾಲಗೊಳಿಸುತ್ತೇನೆ. ನೀನು ಖರ್ಚು ಮಾಡಿದ್ದಕ್ಕೆ ಬದಲಿಯನ್ನು ನೀಡುತ್ತೇನೆ ಮತ್ತು ನಿನ್ನ ಆಸ್ತಿಯಲ್ಲಿ ಸಮೃದ್ಧಿಯನ್ನು ಹರಿಸುತ್ತೇನೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಾರಣವಾಗುವ ಷರತ್ತುಗಳು ನೆರವೇರಿಸಲು ಅತ್ಯಂತ ಅರ್ಹವಾದ ಷರತ್ತುಗಳಾಗಿವೆ. ಇವು ಲೈಂಗಿಕ ಸಂಪರ್ಕವನ್ನು ಅನುಮತಿಸುವ ಶರತ್ತುಗಳಾಗಿದ್ದು ಮಹಿಳೆ ತನ್ನ ವಿವಾಹ ಕರಾರಿನಲ್ಲಿ ಇವುಗಳ ಬೇಡಿಕೆಯಿಡುತ್ತಾಳೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್ಗಳ ನಂತರ ಈ ಮಹಾ ದಿಕ್ರ್ಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು. ಇವುಗಳ ಅರ್ಥ ಹೀಗಿದೆ: ಲಾ ಇಲಾಹ ಇಲ್ಲಲ್ಲಾಹ್: ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ. ವಹ್ದಹೂ ಲಾ ಶರೀಕ ಲಹೂ: ಅವನಿಗೆ ಅವನ ದೈವಿಕತೆಯಲ್ಲಿ, ಪ್ರಭುತ್ವದಲ್ಲಿ ಮತ್ತು ಅವನ ಹೆಸರು ಮತ್ತು ಗುಣಲಕ್ಷಣಗಳಲ್ಲಿ ಯಾವುದೇ ಸಹಭಾಗಿಗಳಿಲ್ಲ. ಲಹುಲ್ ಮುಲ್ಕ್: ಭೂಮ್ಯಾಕಾಶಗಳ ಹಾಗೂ ಅವುಗಳ ನಡುವೆಯಿರುವ ಎಲ್ಲದರ (ಸಂಪೂರ್ಣ ಬ್ರಹ್ಮಾಂಡದ) ನಿರುಪಾಧಿಕ, ಸಂಪೂರ್ಣ, ಸಮಗ್ರ ಮತ್ತು ವಿಶಾಲವಾದ ಆಧಿಪತ್ಯವು ಅಲ್ಲಾಹನಿಗೆ ಮಾತ್ರ ಸೇರಿದ್ದು. ವಲಹುಲ್ ಹಮ್ದ್: ಅವನು ನಿರುಪಾಧಿಕವಾದ ಸಂಪೂರ್ಣತೆಯಿಂದ ವರ್ಣಿಸಲ್ಪಟ್ಟವನು ಮತ್ತು ಸುಖ-ದುಃಖ ಮುಂತಾದ ಎಲ್ಲಾ ಸ್ಥಿತಿಗಳಲ್ಲೂ ಪ್ರೀತಿಯಿಂದ ಮತ್ತು ಗೌರವದಿಂದ ಸಂಪೂರ್ಣತೆಯೊಂದಿಗೆ ಸ್ತುತಿಸಲ್ಪಡುವವನು. ವಹುವ ಅಲಾ ಕುಲ್ಲಿ ಶೈಇನ್ ಕದೀರ್: ಅವನ ಸಾಮರ್ಥ್ಯವು ಎಲ್ಲಾ ವಿಧಗಳಲ್ಲೂ ಸಂಪೂರ್ಣ ಮತ್ತು ಪರಿಪೂರ್ಣವಾಗಿದೆ. ಅವನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಅವನ ಆಜ್ಞೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್: ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಚಲಿಸುವ ಶಕ್ತಿ, ಅಲ್ಲಾಹನ ಅವಿಧೇಯತೆಯಿಂದ ವಿಧೇಯತೆಗೆ ಚಲಿಸುವ ಶಕ್ತಿ ಯಾರಿಗೂ ಇಲ್ಲ. ಅಲ್ಲಾಹನಿಂದಲ್ಲದೆ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಅವನು ಸಹಾಯ ಮಾಡುವವನಾಗಿದ್ದು ಅವನ ಮೇಲೆಯೇ ಭರವಸೆಯಿಡಬೇಕಾಗಿದೆ. ಲಾ ಇಲಾಹ ಇಲ್ಲಲ್ಲಾಹು, ವಲಾ ನಅ್ಬುದು ಇಲ್ಲಾ ಇಯ್ಯಾಹ್: ಅಲ್ಲಾಹನ ಆರಾಧನಾರ್ಹತೆಗೆ ಮತ್ತು ಶಿರ್ಕ್ನ (ಬಹುದೇವಾರಾಧನೆಯ) ನಿಷೇಧಕ್ಕೆ ಇದು ಒತ್ತುಕೊಡುತ್ತದೆ. ಅಲ್ಲಾಹನ ಹೊರತು ಯಾರೂ ಆರಾಧನೆಗೆ ಅರ್ಹರಲ್ಲ. ಲಹು ನ್ನಿಅ್ಮತು ವಲಹುಲ್ ಫದ್ಲ್: ಅವನು ಅನುಗ್ರಹವನ್ನು ಸೃಷ್ಟಿಸಿ ಅದನ್ನು ತನ್ನ ಒಡೆತನದಲ್ಲಿಡುತ್ತಾನೆ. ತನ್ನ ದಾಸರಲ್ಲಿ ಅವನು ಬಯಸಿದವರಿಗೆ ಅದನ್ನು ನೀಡಿ ಅನುಗ್ರಹಿಸುತ್ತಾನೆ. ವಲಹು ಸ್ಸನಾಉಲ್ ಹಸನ್: ಅವನ ಸಾರ, ಗುಣಲಕ್ಷಣಗಳು, ಕ್ರಿಯೆಗಳು ಮತ್ತು ಅನುಗ್ರಹಗಳು ಎಲ್ಲಾ ಸ್ಥಿತಿಗಳಲ್ಲೂ ಪ್ರಶಂಸನೀಯವಾಗಿವೆ. ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ್: ನಾವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇವೆ. ನಾವು ತೋರಿಕೆಗಾಗಿ ಅಥವಾ ಕೀರ್ತಿಗಾಗಿ ಅವನನ್ನು ಅನುಸರಿಸುವುದಿಲ್ಲ. ವಲವ್ ಕರಿಹಲ್ ಕಾಫಿರೂನ್: ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಏಕದೇವತ್ವದಲ್ಲಿ ಮತ್ತು ಅಲ್ಲಾಹನ ಅರಾಧನೆಯಲ್ಲಿ ಅಚಂಚಲವಾಗಿ ಮುಂದುವರಿಯುತ್ತೇವೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಸತ್ಕರ್ಮಗಳು ವರ್ಷದ ಇತರ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಶ್ರೇಷ್ಠವಾಗಿದೆ. ಆಗ ಸಹಾಬಿಗಳು (ಸಂಗಡಿಗರು) (ಅವರೆಲ್ಲರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಇತರ ದಿನಗಳಲ್ಲಿ ಮಾಡುವ ಜಿಹಾದ್ನ ಬಗ್ಗೆ, ಅದು ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಶ್ರೇಷ್ಠವಲ್ಲವೇ? ಎಂದು ಕೇಳಿದರು. ಏಕೆಂದರೆ ಅವರ ದೃಷ್ಟಿಕೋನದಲ್ಲಿ ಜಿಹಾದ್ ಅತಿ ಶ್ರೇಷ್ಠ ಸತ್ಕರ್ಮವಾಗಿತ್ತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: ಇತರ ದಿನಗಳಲ್ಲಿ ಮಾಡುವ ಜಿಹಾದ್ಗಿಂತಲೂ ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳು ಶ್ರೇಷ್ಠವಾಗಿವೆ. ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯನ್ನು ಪಣವಾಗಿಟ್ಟು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಲು ಹೊರಟು, ನಂತರ ಅಲ್ಲಾಹನ ಮಾರ್ಗದಲ್ಲಿ ತನ್ನ ಆಸ್ತಿಯನ್ನು ಹಾಗೂ ಆತ್ಮವನ್ನು ಕಳಕೊಳ್ಳುವುದರ ಹೊರತು. ಇದು ಈ ಶ್ರೇಷ್ಠ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ.
ಅಸರ್ ನಮಾಝನ್ನು ಉದ್ದೇಶಪೂರ್ವಕವಾಗಿ ಅದರ ಸಮಯಕ್ಕಿಂತ ವಿಳಂಬಗೊಳಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಕೆ ನೀಡುತ್ತಿದ್ದಾರೆ. ಹೀಗೆ ಮಾಡುವವನ ಕರ್ಮಗಳು ನಿಷ್ಪಲವಾಗುತ್ತವೆ ಮತ್ತು ನಿರರ್ಥಕವಾಗುತ್ತವೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ವುದೂವಿನ ಐಚ್ಛಿಕ ಕಾರ್ಯಗಳು ಮತ್ತು ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸುತ್ತಾ ಯಾರು ವುದೂ ನಿರ್ವಹಿಸುತ್ತಾರೋ, ಅದು ಅವರ ಪಾಪಗಳು ಪರಿಹಾರವಾಗಲು ಮತ್ತು ದೋಷಗಳು ನಿವಾರಣೆಯಾಗಲು ಕಾರಣವಾಗುತ್ತದೆ. ಎಲ್ಲಿಯವರೆಗೆಂದರೆ, ಅವರ ಕೈಗಳ ಮತ್ತು ಪಾದಗಳ ಉಗುರುಗಳ ಅಡಿಭಾಗದಿಂದಲೂ ಪಾಪಗಳು ನಿವಾರಣೆಯಾಗುತ್ತವೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ತನ್ನ ಪೋಷಣೆಯಲ್ಲಿರುವ ಪತ್ನಿ, ತಂದೆ-ತಾಯಿ, ಮಕ್ಕಳು ಮುಂತಾದವರಿಗೆ ಹಣವನ್ನು ಖರ್ಚು ಮಾಡುವಾಗ, ಅದರ ಮೂಲಕ ಅಲ್ಲಾಹನ ಸಾಮೀಪ್ಯ ಮತ್ತು ಅವನ ಪ್ರತಿಫಲವನ್ನು ಬಯಸುವುದಾದರೆ, ಅವನಿಗೆ ಆ ಹಣವನ್ನು ದಾನ ಮಾಡಿದ ಪ್ರತಿಫಲವಿದೆ.